Posts

Showing posts from May, 2020
Image
      ಡಾ . ಎಚ್ . ತಿಪ್ಪೇರುದ್ರಸ್ವಾಮಿರವರ ಪರಿಚಯ - ದಾವಣಗೆರೆ ಜಿಲ್ಲೆಯ ಹೊನ್ನಾಳಿ ಇವರ ಜನ್ಮ ಭೂಮಿ . ಮೈಸೂರು ಇವರ ಕರ್ಮಭೂಮಿ . ಕನ್ನಡ ತಾಯಿಯ ಮಡಿಲನ್ನು ತಮ್ಮ ನೂರಾರು ಕೃತಿಗಳಿಂದ ತುಂಬಿದ ಮಹಾನ್‍ ಸಾಹಿತಿ ಇವರು . ಕತೆ , ಕವನ , ನಾಟಕ , ಕಾದಂಬರಿ , ವಚನಗಳು , ಸಂಶೋಧನೆ , ಸಂಪಾದನೆ , ಸಂಸ್ಕೃತಿ ಚಿಂತನೆ , ಮೀಮಾಂಸೆ , ಬಾನುಲಿ ಚಿಂತನ , ಅನುವಾದ , ವ್ಯಾಖ್ಯಾನ - ಹೀಗೆ ಬಹುತೇಕ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಇವರು ಉತ್ಕೃಷ್ಠ ಸಾಹಿತ್ಯ ರಚಿಸಿದ ಸವ್ಯಸಾಚಿ . ಇವರಿಗೆ ನಾಡಿನ ರಾಜ್ಯ ಸಾಹಿತ್ಯ ಅಕಾಡೆಮಿ , ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು , ನಾಡಿನ ಅಸಂಖ್ಯ ಸಂಘ - ಸಂಸ್ಥೆಗಳ , ಮಠ - ಮಾನ್ಯಗಳ ಗೌರವಾದರಗಳು , ಸನ್ಮಾನ , ಬಿರುದು , ತುಲಾಭಾರ , ಹಾರ - ತುರಾಯಿ ಪ್ರಶಸ್ತಿಗಳು ಸಂದಿವೆ . ಇವರ ಸಾಹಿತ್ಯ ಎಷ್ಟು ಉತ್ಕೃಷ್ಟವೋ ಅದಕ್ಕಿಂತಲೂ ಒಂದು ಗುಲಗಂಡಿ ತೂಕ ಹೆಚ್ಚು ಇವರ ವ್ಯಕ್ತಿತ್ವ ಉತ್ಕೃಷ್ಟವಾಗಿದೆ . ಹಾಗಾಗಿ ಇವರ ಬದುಕಿನ ಚರಿತ್ರೆಯಂತೆಯೇ ಇವರ ಸಾಹಿತ್ಯದ ಅಧ್ಯಯನವೂ ಫಲಪ್ರದವಾಗಿದೆ .      ಡಾ . ಎಚ್ . ತಿಪ್ಪೇರುದ್ರಸ್ವಾಮಿಗಳವರ ಅಪಾರ ಸಾಹಿತ್ಯ ರಾಶಿಯಲ್ಲಿ ಮೊದಲಿಗೆ ಅವರ ' ತಿಪ್ಪೇರುದ್ರ ವಚನಗಳು’ ಕೃತಿಯನ್ನು ಇಲ್ಲಿ ಸಹೃದಯರಿಗೆ ಬಡಿಸಲಾಗಿದೆ . ಇದು ಹೆಸರೇ ಸೂಚಿಸುವಂತೆ ಅವರ ವಚನಗಳ ಸಂಕಲನವಾಗಿದೆ . ಇದರಲ್ಲಿ ಒಟ್ಟು 508 ವ...