ಡಾ.
ಎಚ್.
ತಿಪ್ಪೇರುದ್ರಸ್ವಾಮಿರವರ
ಪರಿಚಯ - ದಾವಣಗೆರೆ
ಜಿಲ್ಲೆಯ ಹೊನ್ನಾಳಿ ಇವರ ಜನ್ಮ
ಭೂಮಿ. ಮೈಸೂರು
ಇವರ ಕರ್ಮಭೂಮಿ.
ಕನ್ನಡ
ತಾಯಿಯ ಮಡಿಲನ್ನು ತಮ್ಮ ನೂರಾರು
ಕೃತಿಗಳಿಂದ ತುಂಬಿದ ಮಹಾನ್
ಸಾಹಿತಿ ಇವರು.
ಕತೆ,
ಕವನ,
ನಾಟಕ,
ಕಾದಂಬರಿ,
ವಚನಗಳು,
ಸಂಶೋಧನೆ,
ಸಂಪಾದನೆ,
ಸಂಸ್ಕೃತಿ
ಚಿಂತನೆ, ಮೀಮಾಂಸೆ,
ಬಾನುಲಿ
ಚಿಂತನ, ಅನುವಾದ,
ವ್ಯಾಖ್ಯಾನ
- ಹೀಗೆ
ಬಹುತೇಕ ಸಾಹಿತ್ಯದ ಎಲ್ಲ
ಪ್ರಕಾರಗಳಲ್ಲಿಯೂ ಇವರು ಉತ್ಕೃಷ್ಠ
ಸಾಹಿತ್ಯ ರಚಿಸಿದ ಸವ್ಯಸಾಚಿ.
ಇವರಿಗೆ
ನಾಡಿನ ರಾಜ್ಯ ಸಾಹಿತ್ಯ ಅಕಾಡೆಮಿ,
ಕೇಂದ್ರ
ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು
, ನಾಡಿನ
ಅಸಂಖ್ಯ ಸಂಘ-ಸಂಸ್ಥೆಗಳ,
ಮಠ-ಮಾನ್ಯಗಳ
ಗೌರವಾದರಗಳು,
ಸನ್ಮಾನ,
ಬಿರುದು,
ತುಲಾಭಾರ,
ಹಾರ-ತುರಾಯಿ
ಪ್ರಶಸ್ತಿಗಳು ಸಂದಿವೆ.
ಇವರ
ಸಾಹಿತ್ಯ ಎಷ್ಟು ಉತ್ಕೃಷ್ಟವೋ
ಅದಕ್ಕಿಂತಲೂ ಒಂದು ಗುಲಗಂಡಿ ತೂಕ
ಹೆಚ್ಚು ಇವರ ವ್ಯಕ್ತಿತ್ವ
ಉತ್ಕೃಷ್ಟವಾಗಿದೆ.
ಹಾಗಾಗಿ
ಇವರ ಬದುಕಿನ ಚರಿತ್ರೆಯಂತೆಯೇ
ಇವರ ಸಾಹಿತ್ಯದ ಅಧ್ಯಯನವೂ
ಫಲಪ್ರದವಾಗಿದೆ .
ಡಾ.
ಎಚ್.
ತಿಪ್ಪೇರುದ್ರಸ್ವಾಮಿಗಳವರ
ಅಪಾರ ಸಾಹಿತ್ಯ ರಾಶಿಯಲ್ಲಿ
ಮೊದಲಿಗೆ ಅವರ 'ತಿಪ್ಪೇರುದ್ರ
ವಚನಗಳು’ ಕೃತಿಯನ್ನು ಇಲ್ಲಿ
ಸಹೃದಯರಿಗೆ ಬಡಿಸಲಾಗಿದೆ.
ಇದು ಹೆಸರೇ
ಸೂಚಿಸುವಂತೆ ಅವರ ವಚನಗಳ ಸಂಕಲನವಾಗಿದೆ.
ಇದರಲ್ಲಿ
ಒಟ್ಟು 508 ವಚನಗಳು
ಇವೆ. ಇದರಲ್ಲಿ
ಏಳು ಅಧ್ಯಾಯಗಳಿವೆ.
ಅವುಗಳೆಂದರೆ
:-
1.
ತಿಪ್ಪೇರುದ್ರ
ಪ್ರಭು : ಅಂಕಿತಶಕ್ತಿ
2.
ಸೃಷ್ಟಿಶಕ್ತಿ
- ಅನ್ವೇಷಣೆ
3.
ಜೀವನ ;
ಧರ್ಮ
4.
ಮಾನವ ;
ಮನಸ್ಸು
5.
ಸಮಾಜ ;
ಚಿಂತನೆ
6.
ಆಚಾರ ;
ವಿಚಾರ
7.
ಅಂತರಂಗ
; ಅನುಭಾವ
ಪ್ರಸ್ತುತ
ಎರಡನೇ ಅಧ್ಯಾಯದಿಂದ ವಿಶ್ಲೆಷಿಸಲಾದ
ವಚನಗಳನ್ನು ಪ್ರಕಟಿಸಲಾಗಿದೆ.
‘ತಿಪ್ಪೇರುದ್ರ
ಪ್ರಭು’ ಎಂಬುದು ಡಾ.
ಎಚ್.
ತಿಪ್ಪೇರುದ್ರಸ್ವಾಮಿರವರ
ವಚನಗಳ ಅಂಕಿತ.
ಪ್ರಸ್ತುತ
ವಚನಗಳನ್ನು ಡಾ.
ಎಚ್.
ತಿಪ್ಪೇರುದ್ರಸ್ವಾಮಿರವರ
ಮಗಳಾದ ಡಾ.
ಎಚ್.ಟಿ.
ಶೈಲಜಾ
ರವರು ವಿಶ್ಲೇಷಿಸಿರುತ್ತಾರೆ.
ಡಾ.
ಎಚ್.
ತಿಪ್ಪೇರುದ್ರಸ್ವಾಮಿರವರ
ವಚನಗಳನ್ನು ಹಾಗು ವಿಶ್ಲೇಷಣೆಯನ್ನು
ಇಲ್ಲಿ ಪ್ರಕಟಿಸಲಾಗಿದೆ.

Comments
Post a Comment